ದೇವಾಲಯದ ಇತಿಹಾಸ

ಸರ್ವ ಸ್ವರೂಪೇ ಸರ್ವೇತಿ ಸರ್ವ ಶಕ್ತಿ ಸಮನ್ವಿತೇ | ಭಯೇಭ್ಯಃ ತ್ರಾಹಿನೋ ದೇವಿ ದುರ್ಗೇ ದೇವಿ ನಮೋಸ್ತುತೇ.

Speaker 1

“ಪ್ರಸೀದತು ಶ್ರೀ ಜಗದಂಬಾ”

ನಮ್ಮ ರಾಜ್ಯದ ಹೆಮ್ಮೆಯ ಜಿಲ್ಲೆಯಾದ ಉತ್ತರ ಕನ್ನಡ ಅನೇಕ ದೇವತೆಗಳ ನೆಲೆಬೀಡಾಗಿದೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಎತ್ತರವಾದ ಶಿಖರದ ತುತ್ತತುದಿಯಲ್ಲಿ ನೀಲಕೋಡು ಗ್ರಾಮದಲ್ಲಿ ಭಕ್ತಾಭೀಷ್ಟಳಾಗಿ ನೆಲೆ ನಿಂತಿದ್ದಾಳೆ ಶ್ರೀ ಕರಿಕಾನ ಪರಮೇಶ್ವರೀ ಜಗನ್ಮಾತೆ,

"ಜಗತಃ ಪಿತರೌ‍ ವಂದೇ ಪಾರ್ವತೀ ಪರಮೇಶ್ವರ" ಎನ್ನುವ ಕಾಳಿದಾಸನ ಉಕ್ತಿಯಂತೆ ಈ ಕ್ಷೇತ್ರದಲ್ಲಿ ವಂದಡಿಕೆ ಶ್ರೀ ಶಂಭುಲಿಂಗೇಶ್ವರ ಹಾಗೂ ತಾಯಿ ಶ್ರೀ ಪರಮೇಶ್ವರೀ ಸದಾ ಜಾಗೃತರಾಗಿ ಭಕ್ತರನ್ನ ಸಲಹುತ್ತಿದ್ದಾರೆ. ಸುಮಾರು ೬೦೦ ವರ್ಷಗಳಿಂದಲೂ ಶುದ್ಧಾಚಾರದಿಂದ ತ್ರಿಕಾಲ ಪೂಜೆ ನಡೆಯುತ್ತಾ ಬಂದಿದೆ.ದೇವಸ್ಥಾನ ಶಿಥಿಲಗೊಂಡಾಗ ಭಗವಾನ್ ಶ್ರೀಧರ ಸ್ವಾಮಿಗಳು ದೇವಸ್ಥಾನದ ಜೀರ್ಣೋದ್ಧಾರವನ್ನು ೧೯೫೬ನೇ ಇಸ್ವಿಯಲ್ಲಿ ನೆರವೇರಿಸಿದರು.

ಪ್ರತೀ ವರ್ಷ ಶರನ್ನವರಾತ್ರಿಯಲ್ಲಿ ಪ್ರತಿದಿನ ಚಂಡಿಕಾ ಹೋಮ, ವಿಶೇಷ ಅಲಂಕಾರ ಪೂಜಾದಿಗಳು ಭಕ್ತರ ಕೋರಿಕೆಯಂತೆ ನಡೆಯುತ್ತದೆ. ಹಾಗೆ ಶಂಭುಲಿಂಗೇಶ್ವರನಿಗೂ ನಿತ್ಯ ಪೂಜೆಗಳು ನಡೆಯುತ್ತಿದೆ. ಜಲಾವೃತ್ತನಾಗಿರುವ ಶಂಭುಲಿಂಗೇಶ್ವರನಿಗೆ ನಿತ್ಯ ನೈವೇದ್ಯ ಪೂಜಾದಿಗಳು ಇದೆ. ತಾಯಿ ಪರಮೇಶ್ವರಿ ನಮ್ಮ ನಿಮ್ಮೆಲ್ಲರಿಗೂ ಸದಾ ಮಂಗಳವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.